ಭಾನುವಾರ, ಡಿಸೆಂಬರ್ 14, 2008

ತೃತೀಯರಂಗ ಗಗನಕುಸುಮ

ಜಯ, ಮಾಯಾ, ದೇವ, ಚಂದ್ರ ಎಡ ಮತ್ತು ಬಲ ಪಕ್ಕದಲ್ಲಿದ್ದರೂ ತೃತೀಯ ರಂಗ ಗಳಿಸಬಹುದಾದ ಸದಸ್ಯರ ಸಂಖ್ಯೆ ನೂರನ್ನು ದಾಟುವುದು ಅನುಮಾನವಾಗಿರುವಾಗ ಸರ್ಕಾರ ರಚಿಸುವ ಸಾಧ್ಯತೆ ಗಗನಕುಸುಮವೇ ಸರಿ. ಉತ್ತರಭಾರತದ ರಾಜ್ಯಗಳ ಫಲಿತಾಂಶ ಸ್ವಲ್ಪಮಟ್ಟಿಗೆ ಕಾಂಗ್ರೆಸ್ ಪರ ಇದ್ದರೂ ಒಟ್ಟಾರೆ ಭಾ.ಜ.ಪ. ಮತ್ತು ಕಾಂಗ್ರೆಸ್ಸಿಗೆ ಸಮಬಲವನ್ನು ಸೂಚಿಸುತ್ತದೆ. ಏನ್ ಡಿ ಏ ಮತ್ತು ಯು ಪಿ ಏ ಅನುಯಾಯಿ ಪಕ್ಷಗಳು ಅಧಿಕಾರದ ಆಸೆಗಾಗಿ ತತ್ವಗಳನ್ನು ಗಾಳಿಗೆ ತೂರಿ ಇವೆರಡರಲ್ಲಿ ಒಂದನ್ನು ಅನುಸರಿಸಬುಹುದಾದ ಸಂಧರ್ಭ ಉಂಟಾಗಿ ಕಿಚಡಿ ಸರ್ಕಾರವೊಂದು ರಚಿಸಲ್ಪಡುವ ಸಾಧ್ಯತೆಯೇ ಹೆಚ್ಚಾಗಿ ಕಂಡುಬರುತ್ತದೆ. ಜಯಲಲಿತಾ ವಾಮರಂಗಗಳ ಜೊತೆ ಒಪ್ಪಂದ ಮಾಡಿಕೊಂಡಿರುವುದು ಕರುಣಾನಿಧಿಗೆ ಅನುಕೂಲವಾಗುವುದೆ ಹೊರತು ಜಯಲಲಿತಾಗೆ ಇದರಿಂದ ಭಾರಿ ಹೊಡೆತ ಬಿದ್ದು ರಾಜಕೀಯವಾಗಿ ಆಕೆ ತೆರೆಮರೆ ಸೇರಬಹುದಾಗಿದೆ . ಕರ್ನಾಟಕದಲ್ಲಿ ದೇವೇಗೌಡರ ಚಟುವಟಿಕೆ ಹಾಸನ ಜಿಲ್ಲೆಗೆ ಮಾತ್ರ ಸೀಮಿತವಾಗಿ ಅವರು ಅಷ್ಟಕ್ಕೆ ಸಾಮಾಧಾನಪಡಬೇಕಾಗಿದೆ. ಮಾಯಾರ ಪ್ರಾಧನಮಂತ್ರಿಯಾಗುವ ಕನಸು ಮಾಯಬಜಾರಿನಲ್ಲೆ ಮಾಯವಾಗಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ