ಅಮೆರಿಕೆಯ ಪ್ರಿನ್ಸ್ ಜಾರ್ಜ್ ಕೌಂಟಿ ಯಂಬಲ್ಲಿ ಕರಿಯ ಜನಾಂಗಕ್ಕೆ ಸೇರಿದ ಇಪ್ಪತ್ತೇಳು ವರ್ಷದ ಮಹಿಳೆಯೊಬ್ಬಳು ನಾಲ್ಕು ಹೆಣ್ಣುಮಕ್ಕಳೂ ಸೇರಿ ಒಂದು ಗಂಡು ಮಗುವಿನ ಸಮೇತ ಐದು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಎಲ್ಲ ಮಕ್ಕಳು ಆರೋಗ್ಯವಾಗಿದ್ದು ಅವುಗಳಿಗೆ ಸ್ತನ್ಯಪಾನ ಮಾಡಿಸುವಲ್ಲಿ ಆಕೆ ಸುಸ್ತಾಗಿಬಿಡುತ್ತಾಳೆ. ಪ್ರತಿ ೪೦ ನಿಮಿಷಕ್ಕೊಮ್ಮೆ ಸರದಿಯಂತೆ ಹಾಲು ಉಣ್ಣಿಸಲು ಈಕೆ ಮುಂಜಾನೆ ೩ ಗಂಟೆಯಿಂದಲೇ ಪ್ರಾರಂಭಿಸಿ ಈಕೆಗೆ ವಿಶ್ರಾಂತಿ ಎಂಬುದೇ ಇಲ್ಲವಾಗಿ ಬಹಳಷ್ಟು ಪ್ರಾಯಾಸ ಪಡಬೇಕಾಗಿದೆ. ಈಕೆಯ ತಾಯಿ ಕೃತಕ ಹಾಲಿನ ಡಬ್ಬ ತಂದು ಮಕ್ಕಳಿಗೆ ಕುಡಿಸುವಾಗ ಈಕೆಗೆ ಊಟ ಮಾಡಿ ನಿದ್ರೆ ಮಾಡಲು ಅವಕಾಶವಾಗುತ್ತದೆ.
ಈ ಮಕ್ಕಳಿಗೆ ಪ್ರತಿದಿನ ಕನಿಷ್ಠ ನಲವತ್ತು ಡೈಪೆರ (ಶೌಚ ಸಾದನ) ಬೇಕಾಗಿ, ಇದೇ ಅಲ್ಲದೆ ಮಕ್ಕಳ ತಾಯಿಯ ಪೌಷ್ಟಿಕ ಆಹಾರ ಕೊರತೆ, ವೈದ್ಯಕೀಯ ಸೇವೆಗೆ ತಗಲುವ ವೆಚ್ಹ, ಶಿಶುಗಳಿಗೆ ಬಟ್ಟೆ, ಹಾಸಿಗೆ ಹೊದಿಕೆ, ಇನ್ನಿತರ ಅಗತ್ಯಗಳಿಗೆ ಹಣ ಸಾಲದೆ ಈಕೆ ಬಹಳಷ್ಟು ಕಷ್ಟ ಅನುಭವಿಸುತಿದ್ದಾಳೆ. ಈಕೆಯ ಗಂಡ ಸೂಡಾನ್ ಎಂಬಲ್ಲಿ ಮಿಲಿಟರಿ ಯೋಧನಾಗಿದ್ದು ಬರುವ ಸಂಬಳ ಕಡಿಮೆಯಿದ್ದು ಸಂಸಾರ ತೂಗಿಸುವುದು ಕಷ್ಟವಾಗಿರುವುದೇ ಅಲ್ಲದೆ ಈತ ಅಮೆರಿಕೆಗೆ ಬಂದು ಮಕ್ಕಳನ್ನು ನೋಡಲು ಆಗದಷ್ಟು ಕರ್ತವ್ಯನಿರತನಾಗಿದ್ದು ಕೇವಲ ಮಕ್ಕಳ ಫೋಟೋಗಳನ್ನು ನೋಡಿಕೊಂಡು ತೃಪ್ತಿ ಪಡಬೇಕಾಗಿದೆ.
ಈಕೆಗೆ ವಿಮೆಯ ಸಹಾಯವೂ ದೊರಕಿಲ್ಲ. ಕಾರಣ ಈಕೆ ವಿದೇಶೀಯ ಪ್ರಜೆಯಾಗಿದ್ದು ವಿಮೆಯ ಕಾನೂನು ತೊಡುಕುಗಳು ಈಕೆಗೆ ವಿಮೆಯ ಸೌಲಭ್ಯ ದೊರಕಲು ಅನಾನುಕೂಲವಾಗಿದೆ. ಈಕೆಯ ನೆರಹೊರೆಯವರು ಸಹಾಯ ಮಾಡುತಿದ್ದು ಆಕೆ ಎಲ್ಲರಿಗು ಬಹಳಷ್ಟು ಚಿರರುಣಿಯಾಗಿದ್ದಾಳೆ. ಇಂತಹ ಕಷ್ಟ ಪರಿಸ್ಥಿತಿಯಲ್ಲೂ ಸಹ ಆಕೆ ಈ ಮಕ್ಕಳು ತನಗೆ ದೇವರು ಕೊಟ್ಟ ವರ ಎಂದು ಹೆಮ್ಮೆಯಿಂದ ಹೇಳುತ್ತಾಳೆ.
ಮಂಗಳವಾರ, ಜನವರಿ 27, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕೆಲವು ದಿನಗಳ ಹಿಂದೆ ಟಿ. ವಿ ಯಲ್ಲಿ ಒಂದು (3 ಗಂಡು 3 ಹೆಣ್ಣು) ಬಾರಿಗೆ 6 ಮಕ್ಕಳನ್ನು ಹೆತ್ತ ತಾಯಿ ಮತ್ತು ಆ ಮಕ್ಕಳನ್ನು ನೋಡಿದ್ದೆ. ಅದಕ್ಕೆ ಮುಂಚಿನ ಹೇರಿಗೆಯಲ್ಲಿ ಆಕೆಗೆ 2 ಅವಳಿ ಮಕ್ಕಳಿದ್ದು ಒಟ್ಟು ಆಕೆಗೆ 8 ಮಕ್ಕಳು. ಸುಮಾರು 3 ವರ್ಷದ ಆ ಮಕ್ಕಳ ಆಟ , ದಿನಾಚಾರ, ಅಪ್ಪ ಅಮ್ಮ ಪಡುವ ಪಾಡು ಎಲ್ಲ್ಲ ನೋಡಿ ಅಚ್ಚರಿ ಪಟ್ಟಿದ್ದೆ. ಅಮಕ್ಕಳು ಸಹ ಆರೋಗ್ಯವಾಗಿ ಸರಿಯಾದ ಬೆಳವಣಿಗೆ ಹೊಂದಿದಂತೆ ಕಂಡುಬಂದವು. ಇದೀಗ ನೀವು ಬರೆದ ಈ 5 ಮಕ್ಕಳ ವಾರ್ತೆ.. ಅಷ್ಟೊಂದು ಮಕ್ಕಳನ್ನು ಒಟ್ಟಿಗೆ ಬೆಳೆಸುವ ಆ ತಂದೆ ತಾಯಿಯಲಿಗೆ ಹ್ಯಾಟ್ಸ್ ಆಫ್.
ಪ್ರತ್ಯುತ್ತರಅಳಿಸಿರಂಜನಾ